ಸಮ್ಮೇಳನದ ನಿರ್ಣಯಗಳು
೧.ವಿಶ್ವವಿದ್ಯಾಲಯಗಳ ಪರೀಕ್ಷೆಗಳ ಪಲಿತಾಂಶವನ್ನು ಪರೀಕ್ಷೆ ಮುಗಿದ ಒಂದು-ಒಂದುವರೆ ತಿಂಗಳಲ್ಲಿ ಪ್ರಕಟಿಸಬೇಕು
೨.ದೂರ ಶಿಕ್ಷಣಕ್ಕೆ ಇನ್ನೂ ಹೆಚ್ಚಿನ ಮಾನ್ಯತೆ ನೀಡಬೇಕು. ದೂರ ಶಿಕ್ಷಣ ಕೇಂದ್ರಗಳು ಮತ್ತು ವಿದ್ಯಾರ್ಥಿಗಳನ್ನು ಹೆಚ್ಚು ಗೌರವದಿಂದ ಕಾಣಬೇಕು
೩.ವಿದ್ಯಾರ್ಥಿಗಳ ಗುರುತು ಪತ್ರವನ್ನೇ ಬಸ್‌ಪಾಸ್ ಎಂದು ಪರಿಗಣಿಸಬೇಕು. ಸರಕಾರಿ ಮತ್ತು ಖಾಸಗಿ ಬಸ್‌ಗಳಲ್ಲಿ ಅದನ್ನೇ ಆಧಾರವಾಗಿರಿಸಿ ಶೇ ೫೦ ರಿಯಾಯಿತಿ ನೀಡುವುದು.
೪.ಬಸ್ಸ್‌ನಲ್ಲಿ ಯಾವುದೇ ಹೊತ್ತಿಗಾದರೂ ಒಮ್ಮೆ ಹೋಗಲು ಮತ್ತು ಒಮ್ಮೆ ಬರಲು ಟಿಕೆಟ್‌ನಲ್ಲಿ ರಿಯಾಯಿತಿ ನೀಡುವುದು ಸಂಜೆ ೬ ರ ನಂತರ ಮತ್ತು ಬೆಳಿಗ್ಗೆ ೮ ರ ಒಳಗೆ ರಿಯಾಯಿತಿ ಇಲ್ಲವೆಂದು ಸತಾಯಿಸಬಾರದು
೫.ವಿದ್ಯಾರ್ಥಿಗಳ ಬಹುಮುಖಿ ಚಟುವಟಿಕೆಗಳಿಗೆ ಅನುಕೂಲವಾಗಲು ರವಿವಾರವೂ ರಿಯಾಯಿತಿ ತೋರಬೇಕು
೬.ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಹ್ವಾನ ಪತ್ರವಿರುವ ವಿದ್ಯಾರ್ಥಿಗಳಿಗೆ ಸರಕಾರಿ/ಖಾಸಗಿ ಬಸ್ಸ್‌ಗಳಲ್ಲಿ ಶೇ ೫೦ ರಿಯಾಯಿತಿ ನೀಡಬೇಕು
೭.ಹೆದ್ದಾರಿ ಬದಿ ಇರುವ ಉನ್ನತ ಶಿಕ್ಷಣ ಸಂಸ್ಥೆಗಳ ಎದುರು ಸರಕಾರಿ ಮತ್ತು ಎಕ್ಸ್‌ಪ್ರೆಸ್ ಬಸ್ಸ್‌ಗಳಿಗೆ ನಿಲುಗಡೆ (ಸ್ಟಾಪ್) ನೀಡಬೇಕು.
೮.ವಿದ್ಯಾರ್ಥಿ ಸಾಹಿತ್ಯ ಸಮ್ಮೇಳಗಳಲ್ಲಿ ಕಾಲೇಜು ವೆಚ್ಚದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕುಲಪತಿಗಳು ಆದೇಶ ಹೊರಡಿಸಬೇಕು.
ಈ ಎಂಟು ನಿರ್ಣಯಗಳನ್ನು ೧೪ನೆಯ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವು ಕೈಗೊಂಡಿದ್ದು ಸರಕಾರ, ರಾಜ್ಯಪಾಲರು, ಕುಲಪತಿಗಳಿಗೆ ಮನವಿ ಸಲ್ಲಿಸಲು ನಿರ್ಣಯಿಸಲಾಗಿದೆ. ನಿರ್ಣಯಗಳನ್ನು ಸಮ್ಮೇಳನ ಸಂಘಟಕ, ಪತ್ರಕರ್ತ ಶೇಖರ ಅಜೆಕಾರು ಅವರು ಸಮಾರೋಪ ಸಮಾರಂಭದಲ್ಲಿ ಮಂಡಿಸಿದರು. ಸಭೆಯು ಚಪ್ಪಾಳೆ ತಟ್ಟಿ ಅನುಮೋದನೆ ನೀಡಿತು.
No comments:
Post a Comment