Ahvana patrike a Newspaper sized Invitation created by shekara ajekar,.

Thursday, July 1, 2010

umesh roa yekkar honoured


ಪತ್ರಿಕೆಗಳಿಂದ ನನಗೆ ಬೆಲೆ -ಉಮೇಶ್ ರಾವ್ ಎಕ್ಕಾರು
ಪತ್ರಿಕೆಗಳಿಂದ ನನಗೆ ಬೆಲೆ ಬಂದಿದೆ. ಹೃದಯ ರಂಜನೆಗೆ ಮತ್ತು ಮೆದುಳಿನ ರಂಜನೆಗೆ ಪತ್ರಿಕೆಗಳು ಅತೀ ಅಗತ್ಯ ಎಂದು ಪ್ರಸಿದ್ದ ಪತ್ರಿಕಾ ಸಂಗ್ರಾಹಕ ಉಮೇಶ್ ರಾವ್ ಎಕ್ಕಾರ್ ಅವರು ಹೇಳಿದರು. ಅವರು ಪತ್ರಕರ್ತರ ವೇದಿಕೆ, ಮೂಡುಬಿದಿರೆಯ ಶ್ರೀಕಾಲೇಜು, ಮುಲ್ಕಿ, ಕಿನ್ನಿಗೋಳಿ ಪತ್ರಕರ್ತರ ಸಹಕಾರದೊಂದಿಗೆ ಉಮೇಶ್ ರಾವ್ ಎಕ್ಕಾರ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ನೀಡಿದ ಪತ್ರಿಕಾ ದಿನಾಚರಣೆ ಗೌರವವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.
ನನ್ನ ಮೂರುಸಾವಿರಕ್ಕಿಂತ ಮಿಕ್ಕ ಪತ್ರಿಕಾ ಸಂಗ್ರಹದಲ್ಲಿ ಅರ್ಧದಷ್ಟನ್ನು ನೀಡಿದವರು ಹರಿಕೃಷ್ಣ ಪುನರೂರು ಎಂದ ಅವರು ಪತ್ರಿಕೆಗಳು ಪತ್ರಕರ್ತರು ನೀಡಿದ ಸಹಕಾರವನ್ನು ಸ್ಮರಿಸಿಕೊಂಡರು.
ಉಮೇಶ ರಾಯರನ್ನು ಮೂವತ್ತು ಪತ್ರಿಕೆಗಳು, ತೆಂಗಿನ ಸಸಿಯನ್ನು ನೀಡಿ ಗೌರವಿಸಲಾಯಿತು.
ಹಿರಿಯರನ್ನು ಗೌರಿಸುವುದನ್ನು ನಾವು ಮರೆಯುತ್ತಿದ್ದೇವೆ, ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಅಪೂರ್ವ ಪತ್ರಿಕಾ ಸಂಗ್ರಹಕ, ಹಿರಿಯರಾದ ಉಮೇಶ್ ಅವರನ್ನು ಗೌರವಿಸಿರುವುದು ಒಳ್ಳೆಯ ಸಂಪ್ರದಾಯ ಎಂದು ಡೈಜಿವರ್ಲ್ಡ್ ವೀಕ್ಲಿಯ ಸಂಪಾದಕ ಹೇಮಾಚಾರ್ಯ ಅಭಿಪ್ರಾಯ ಪಟ್ಟರು. ಸಮಾಜದ ಅಭಿವೃದ್ದಿಯಲ್ಲಿ ಪತ್ರಿಕೆಗಳು ಮಹತ್ವದ ಪಾತ್ರವಹಿಸುತ್ತದೆ ಎಂದು ಕಿನ್ನಿಗೋಳಿ ಗ್ರಾಮಪಂಚಾಯತ್‌ನ ಅಧ್ಯಕ್ಷ ದೇವಪ್ರಸಾದ್ ಪುನರೂರು ಹೇಳಿದರು.
ಪತ್ರಿಕಾ ದಿನಾಚರಣೆಯ ದಿನ ಗೌರವಿಸಲ್ಪಡಬೇಕಾದ ಅಗ್ರ ಪಂಕ್ತಿಯ ವ್ಯಕ್ತಿಗಳಲ್ಲಿ ಉಮೇಶ್ ಒಬ್ಬರು. ಅವರ ಮೇಲೆ ಅಪಾರ ಗೌರವ ಎಂದು ಪತ್ರಕರ್ತ ಮಿಥುನ್ ನುಡಿದರು. ಸ್ಥಳೀಯ, ಗ್ರಾಮೀಣ ಪತ್ರಕರ್ತರ ಸಬಲೀಕರಣದಿಂದ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ಸಾಧ್ಯ ಇದೆ ಎಂದು ಅದ್ಯಕ್ಷತೆ ವಹಿಸಿದ್ದ ಪತ್ರಕರ್ತರ ವೇದಿಕೆ ಉಡುಪಿ ಜಿಲ್ಲಾ ಅದ್ಯಕ್ಷ್ಷ ಶೇಖರ ಅಜೆಕಾರು ಅಭಿಪ್ರಾಯ ಪಟ್ಟರು.
ಎಸ್.ಡಿ.ಎಂ ಕಾಲೇಜಿನ ಸ್ನಾತಕೋತರ ಪತ್ರಿಕೋದ್ಯಮ ವಿದ್ಯಾರ್ಥಿ ಬೊರ್ಗಲ್ ಗುಡ್ಡೆ ಮಂಜುನಾಥ್ ವಂದಿಸಿದರು.

Wednesday, April 28, 2010

If you want to change your tommorrows .....JOIN SHREE COLLEGE

Tuesday, October 13, 2009

Udupi sneha tutorial got dr.Karntha sanstika gouravavivek alva of K.S.Hegde Management institute honoured at vidhyarti sammelana


vidhyarti sahitya sammelana president honour

Srinivasa Roa and Savithri roa couple honoured with sahitya sevaka sresta dampati award

shreyas hegde got dr Karantha vidhyartii gourav

Ramananda ajekar honoured at vidhyarti sammelana


Chandraprabha honoured in vidhyarthi sammelana


Rajyashree kulamarva of puttur vivekananda engineering college honoured


clara B.Com student of shreecollege honoured at vidhyarthi sammelana


Monday, October 12, 2009

ಸಮರೋಪ ಸಮಾರಂಭ
ಕವಿಗೊಷ್ಟಿ ದಿವಿತ್ ಕೊಟಿಯಾನ್ ಅಧ್ಯಕ್ಷತೆಯಲ್ಲಿ

ಕಥಾ ಗೊಷ್ಟಿ ನಾ.ಮೊಗಸಾಲೆ ಸಮನ್ವಯತೆಯಲ್ಲಿ
ಸಮ್ಮೇಳನದ ನಿರ್ಣಯಗಳು

ಸಮ್ಮೇಳನದ ನಿರ್ಣಯಗಳು
೧.ವಿಶ್ವವಿದ್ಯಾಲಯಗಳ ಪರೀಕ್ಷೆಗಳ ಪಲಿತಾಂಶವನ್ನು ಪರೀಕ್ಷೆ ಮುಗಿದ ಒಂದು-ಒಂದುವರೆ ತಿಂಗಳಲ್ಲಿ ಪ್ರಕಟಿಸಬೇಕು
೨.ದೂರ ಶಿಕ್ಷಣಕ್ಕೆ ಇನ್ನೂ ಹೆಚ್ಚಿನ ಮಾನ್ಯತೆ ನೀಡಬೇಕು. ದೂರ ಶಿಕ್ಷಣ ಕೇಂದ್ರಗಳು ಮತ್ತು ವಿದ್ಯಾರ್ಥಿಗಳನ್ನು ಹೆಚ್ಚು ಗೌರವದಿಂದ ಕಾಣಬೇಕು
೩.ವಿದ್ಯಾರ್ಥಿಗಳ ಗುರುತು ಪತ್ರವನ್ನೇ ಬಸ್‌ಪಾಸ್ ಎಂದು ಪರಿಗಣಿಸಬೇಕು. ಸರಕಾರಿ ಮತ್ತು ಖಾಸಗಿ ಬಸ್‌ಗಳಲ್ಲಿ ಅದನ್ನೇ ಆಧಾರವಾಗಿರಿಸಿ ಶೇ ೫೦ ರಿಯಾಯಿತಿ ನೀಡುವುದು.
೪.ಬಸ್ಸ್‌ನಲ್ಲಿ ಯಾವುದೇ ಹೊತ್ತಿಗಾದರೂ ಒಮ್ಮೆ ಹೋಗಲು ಮತ್ತು ಒಮ್ಮೆ ಬರಲು ಟಿಕೆಟ್‌ನಲ್ಲಿ ರಿಯಾಯಿತಿ ನೀಡುವುದು ಸಂಜೆ ೬ ರ ನಂತರ ಮತ್ತು ಬೆಳಿಗ್ಗೆ ೮ ರ ಒಳಗೆ ರಿಯಾಯಿತಿ ಇಲ್ಲವೆಂದು ಸತಾಯಿಸಬಾರದು
೫.ವಿದ್ಯಾರ್ಥಿಗಳ ಬಹುಮುಖಿ ಚಟುವಟಿಕೆಗಳಿಗೆ ಅನುಕೂಲವಾಗಲು ರವಿವಾರವೂ ರಿಯಾಯಿತಿ ತೋರಬೇಕು
೬.ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಹ್ವಾನ ಪತ್ರವಿರುವ ವಿದ್ಯಾರ್ಥಿಗಳಿಗೆ ಸರಕಾರಿ/ಖಾಸಗಿ ಬಸ್ಸ್‌ಗಳಲ್ಲಿ ಶೇ ೫೦ ರಿಯಾಯಿತಿ ನೀಡಬೇಕು
೭.ಹೆದ್ದಾರಿ ಬದಿ ಇರುವ ಉನ್ನತ ಶಿಕ್ಷಣ ಸಂಸ್ಥೆಗಳ ಎದುರು ಸರಕಾರಿ ಮತ್ತು ಎಕ್ಸ್‌ಪ್ರೆಸ್ ಬಸ್ಸ್‌ಗಳಿಗೆ ನಿಲುಗಡೆ (ಸ್ಟಾಪ್) ನೀಡಬೇಕು.
೮.ವಿದ್ಯಾರ್ಥಿ ಸಾಹಿತ್ಯ ಸಮ್ಮೇಳಗಳಲ್ಲಿ ಕಾಲೇಜು ವೆಚ್ಚದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕುಲಪತಿಗಳು ಆದೇಶ ಹೊರಡಿಸಬೇಕು.
ಈ ಎಂಟು ನಿರ್ಣಯಗಳನ್ನು ೧೪ನೆಯ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವು ಕೈಗೊಂಡಿದ್ದು ಸರಕಾರ, ರಾಜ್ಯಪಾಲರು, ಕುಲಪತಿಗಳಿಗೆ ಮನವಿ ಸಲ್ಲಿಸಲು ನಿರ್ಣಯಿಸಲಾಗಿದೆ. ನಿರ್ಣಯಗಳನ್ನು ಸಮ್ಮೇಳನ ಸಂಘಟಕ, ಪತ್ರಕರ್ತ ಶೇಖರ ಅಜೆಕಾರು ಅವರು ಸಮಾರೋಪ ಸಮಾರಂಭದಲ್ಲಿ ಮಂಡಿಸಿದರು. ಸಭೆಯು ಚಪ್ಪಾಳೆ ತಟ್ಟಿ ಅನುಮೋದನೆ ನೀಡಿತು.

ಶಿಕ್ಷಣ ಉದ್ಯೋಗಗಳನ್ನು ಸೃಷ್ಟಿಸುವ ಯಂತ್ರವಾಗುತ್ತಿದೆ- ಸುನೀಲ್


ಮೂಡುಬಿದಿರೆ : ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ
ಶಿಕ್ಷಣ ಉದ್ಯೋಗಗಳನ್ನು ಸೃಷ್ಟಿಸುವ ಯಂತ್ರವಾಗುತ್ತಿದೆ- ಸುನೀಲ್
ಮೂಡುಬಿದಿರೆ, ಅ. ೧೦ : ಶಿಕ್ಷಣ ಇಂದು ಕೇವಲ ಉದ್ಯೋಗಗಳನ್ನು ಸೃಷ್ಟಿಸುವ ಉತ್ಪಾದನಾ ಯಂತ್ರವಾಗುತ್ತಿದೆ. ಮಾನವೀಯ ಮೌಲ್ಯಗಳನ್ನು ರೂಢಿಸುವ ಕಾರ್‍ಯ ನಡೆಯುತ್ತಿಲ್ಲ ಎಂದು ಯುವ ಬರಹಗಾರ, ಕುಂದಾಪುರದ ಭಂಡಾರ್ಕಾರ್‍ಸ್ ಕಾಲೇಜಿನ ವಿದ್ಯಾರ್ಥಿ ಸುನೀಲ್ ಎಚ್.ಜಿ. ಬೈಂದೂರು ವಿಷಾದಿಸಿದರು.
ಮಿತ್ರಮಂಡಳಿ ಕೋಟ, ಶ್ರೀ ಕಾಲೇಜು ಮೂಡುಬಿದಿರೆ, ದ.ಕ. ಜಿಲ್ಲಾ ಕನ್ನಡ ಪರಿಷತ್ ಇವುಗಳ ಸಹಭಾಗಿತ್ವದಲ್ಲಿ ಮೂಡಬಿದಿರೆ ಸಮಾಜ ಮಂದಿರದಲ್ಲಿ ಡಾ| ಶಿವರಾಮ ಕಾರಂತರ ಸವಿನೆನಪಿನಲ್ಲಿ ಶನಿವಾರ ನಡೆದ ೧೪ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.
ಸಾಹಿತಿ, ಸಂಘಟಕ ಡಾ| ನಾ. ಮೊಗಸಾಲೆ ಅವರು ಸಮ್ಮೇಳನಾಧ್ಯಕ್ಷ ಸುನೀಲ್ ಅವರಿಗೆ ಶಾಲು ಹೊದೆಸಿ ಗೌರವಿಸುವ ಮೂಲಕ ಸಮ್ಮೇಳನವನ್ನು ವಿಶಿಷ್ಟವಾಗಿ ಉದ್ಘಾಟಿಸಿದರು.
ಪರಮಾಣು ಕುಟುಂಬ
ಅವಿಭಕ್ತ ಕುಟುಂಬ ಪದ್ದತಿ ಮಾಯವಾಗುತ್ತಾ ಪರಮಾಣು ಕುಟುಂಬದ ಸ್ವರೂಪ ಕಾಣುತ್ತಿರುವ ಇಂದಿನ ದಿನಗಳಲ್ಲಿ ವ್ಯಕ್ತಿ ಮತ್ತು ಪರಿವಾರದ ನಡುವಿನ ಸಂಬಂಧಗಳು ದುರ್ಬಲವಾಗುತ್ತಿವೆ. ಹಿಂದೆಲ್ಲ ಸಾಂಸ್ಕೃತಿಕ ಪಲ್ಲಟನಗಳು ಎಂಬುದು ದಶಕಗಳ ಅಂತರದಲ್ಲಾಗುತ್ತಿದ್ದರೆ, ಇಂದು ವರುಷದ ಅಂತರದಲ್ಲಿ ಆಗುತ್ತಿವೆ. ಈ ಸಂಕಟಮಯ ಸಂದರ್ಭ ನಾಳಿನ ಪ್ರಜೆಗಳಾದ ಮಕ್ಕಳಲ್ಲಿ, ಯುವ ಜನರಲ್ಲಿ ಅರಿವಿನ, ಬೆಳಕಿನ ಬೀಜಗಳನ್ನು ಬಿತ್ತುವ ಕಾರ್‍ಯ ಇಂಥ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನಗಳಿಂದ ಆಗುತ್ತಿದೆ ಎಂದ ಡಾ| ನಾ. ಮೊಗಸಾಲೆ, ಕಾರಂತರಂತೆ ಜಗತ್ತಿನ ಎಲ್ಲ ಸಂಗತಿಗಳ ಬಗ್ಗೆ ಆಸಕ್ತಿ, ನೇರನಡೆ, ನುಡಿ ಆಳವಾದ ವಿನಯ ರೂಢಿಸಿಕೊಳ್ಳಿ ಎಂದು ಯುವ ಜನರಿಗೆ ಕರೆ ನೀಡಿದರು.
ಶಾಸಕ, ವಿಧಾನಸಭಾ ವಿಪಕ್ಷೀಯ ಮುಖ್ಯ ಸಚೇತಕ ಕೆ. ಅಭಯಚಂದ್ರ ಅವರು, ಹಿರಿಯ ಪತ್ರಕರ್ತ ಪುತ್ತೂರಿನ ವಿ.ಬಿ. ಅರ್ತಿಕಜೆ ಅವರ ಪತ್ರಿಕಾರಂಗ ಪ್ರವೇಶ ಎಂಬ ಕೃತಿಯನ್ನು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಕ್ಷೇತ್ರಾಧ್ಯಕ್ಷ ಕೆ.ಪಿ. ಜಗದೀಶ ಅಧಿಕಾರಿ, ಕೇರಳ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ರಾಜೇಶ್ ಆಳ್ವ ಭಾಗವಹಿಸಿದ್ದರು.
ಪಿಲಿಕುಳಕ್ಕೆ ಕಾರಂತ ಹೆಸರಿಡುವ ಆದೇಶ ಏನಾಯಿತು ?
ರಾಜ್ಯ ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಮಾತನಾಡಿ, ಪಿಲಿಕುಳ ನಿಸರ್ಗ ಧಾಮಕ್ಕೆ ಶಿವರಾಮ ಕಾರಂತರ ಹೆಸರನ್ನಿಡಬೇಕು ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿ ೧೧ ವರ್ಷಗಳಾಗುತ್ತಾ ಬಂದಿದೆ. ಈ ಬಗ್ಗೆ ನಾವು ನಿರಂತರವಾಗಿ, ನಿನ್ನೆಯೂ ಜನಪ್ರತಿನಿಧಿಗಳಿಗೆ, ಸರಕಾರಕ್ಕೆ ಒತ್ತಾಯ ಮಾಡಿದ್ದು, ಇನ್ನೂ ಸರಕಾರಿ ಆದೇಶ ಜಾರಿಯಾಗಿಲ್ಲ. ಪಿಲಿಕುಳದ ಒಂದು ಭಾಗಕ್ಕೆ ಮಾತ್ರ ವನ್ಯಜೀವಿ ವಿಭಾಗ ಕಾರಂತರ ಹೆಸರಿಟ್ಟು ಹೊಣೆ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಸರಕಾರಿ ಆದೇಶ ಮೂಲೆಗುಂಪಾಗಿರುವ ಬಗ್ಗೆ ತೀವ್ರವಾಗಿ ಖಂಡಿಸಿದರು.
ಕೇರಳ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ರಾಜೇಶ್ ಆಳ್ವ ಅವರು, ರಾಮಚಂದ್ರ ಭಟ್ ಕಾಸರಗೋಡು ಅವರ ಕಾರಂತರ ಪುಸ್ತಕಗಳಲ್ಲಿ ಮುದ್ರಿತ ಕರಾವಳಿಯ ಕುರಿತಾದ ವೈವಿಧ್ಯಮಯ ಛಾಯಾಚಿತ್ರ ಪ್ರದರ್ಶನ ಮತ್ತು ಪತ್ರಿಕಾ ಪ್ರದರ್ಶನವನ್ನು ಉದ್ಘಾಟಿಸಿದರು.
ಎಸ್‌ಐಓ ರಾಜ್ಯಾಧ್ಯಕ್ಷ ಶೌಕತ್ ಆಲಿ ಅವರು, ಸರ್ವಧರ್ಮ ಸಮನ್ವಯ ಭಾರತದ ಮುನ್ನಡೆ ಎಂಬ ವಿಷಯದಲ್ಲಿ ಆಶಯ ಭಾಷಣ ಮಾಡಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ. ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕುರಾ ಅವರು ಮಾತನಾಡಿ, ಆತ್ಮವಿಶ್ವಾಸ ಕಳಕೊಳ್ಳಬೇಡಿ. ಸಮಾಜ ಮುಖಿಯಾಗಿ ಬೆಳೆಯಿರಿ. ಒಳ್ಳೆಯತನದೊಂದಿಗೆ ಅನ್ಯಾಯವನ್ನು ಪ್ರತಿಭಟಿಸುವ ಶಕ್ತಿಯನ್ನು ಬೆಳೆಸಿಕೊಳ್ಳಿ - ಶಿವರಾಮ ಕಾರಂತರಂತೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗೌರವ : ೧೬ ಮಕ್ಕಳ ಧ್ವನಿ ಸಾಹಿತ್ಯ ಸಮ್ಮೇಳನಗಳ ಸಂಘಟಕ ಶ್ರೀನಿವಾಸ ರಾವ್ - ಸಾವಿತ್ರಿ ಶಿಕ್ಷಕ ದಂಪತಿಗೆ ಡಾ| ಕಾರಂತ ಸಾಹಿತ್ಯ ಸೇವಕ ಶ್ರೇಷ್ಠ ದಂಪತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ಕಾಲೇಜ್ ಬಳಿಯಿಂದ ಹೊರಟ ಮೆರವಣಿಗೆಯನ್ನು ಪುರಸಭಾ ಸದಸ್ಯ ಮನೋಜ್ ಶೆಟ್ಟಿ ಉದ್ಘಾಟಿಸಿದರು.
ಮಿತ್ರ ಮಂಡಳಿ ಕೋಟದ ಅಧ್ಯಕ್ಷ ಎಚ್. ಶ್ರೀಧರ ಹಂದೆ ಅವರು ಶಿವರಾಮ ಕಾರಂತರ ಕುರಿತಾದ ಶೋಭಾನೆಯೊಂದಿಗೆ ಸ್ವಾಗತಿಸಿದರು.
ಸಂಘಟಕ, ಶ್ರೀ ಕಾಲೇಜ್ ಸಂಸ್ಥಾಪಕ ಶೇಖರ ಅಜೆಕಾರು ಅವರು ವೀಳ್ಯದೆಲೆ, ಅಡಿಕೆ, ಕರವಸ್ತ್ರ ನೀಡಿ ಅತಿಥಿಗಳನ್ನು ಪುರಸ್ಕರಿಸಿದರು. ಅಕ್ಷಯ್ ಜೈನ್ ಕಾರ್‍ಯಕ್ರಮ ನಿರೂಪಿಸಿದರು. ಶೇಖರ ಅಜೆಕಾರು ವಂದಿಸಿದರು.
ಕಾರಂತರ ಬರಹಗಳ ಕುರಿತು ವಿಚಾರಗೋಷ್ಠಿ, ಕಥಾಗೋಷ್ಠಿ ಡಾ| ಕಾರಂತ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ, ಗೌರವ ಪುರಸ್ಕಾರ ಪ್ರದಾನ, ಸಮಾರೋಪ ನಡೆದವು. ಪ್ರೋ| ಸಿ. ಉಪೇಂದ್ರ ಸೋಮಯಾಜಿ, ಸಮ್ಮೇಳನ ಕಾರ್‍ಯದರ್ಶಿಗಳಾದ ವಿವೇಕ್ ಬಂಗೇರಾ, ಬವನ್, ಅಶ್ವಿನಿ ಆಚಾರ್ಯ, ಅಕ್ಷಯ್ ಜೈನ್ ಮತ್ತಿತ್ತರರು ಉಪಸ್ಥಿತರಿದ್ದರು.

೧೪ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯ ಭಾಷಣ:ಸುನೀಲ್ ಎಚ್.ಜಿ. ಬೈಂದೂರು


೧೪ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯ ಭಾಷಣ
ಅಧ್ಯಕ್ಷತೆಯ ಮಾತುಗಳು ಎಂಬ ಹೆಸರುಳ್ಳ ಮಾತುಗಳನ್ನು ಕಿರಿಯನಾಗಿ ಸಾಹಿತ್ಯ ದಿಗ್ಗಜರೆದುರಲ್ಲಿ ಹಂಚಿಕೊಳ್ಳಬಯಸುತ್ತೇನೆ. ನನ್ನ ಮಾತುಗಳು ಆರಂಭಕ್ಕೂ ಮೊದಲು ಡಾ| ಶಿವರಾಮ ಕಾರಂತರನ್ನೊಮ್ಮೆ ನೆನಪಿಸಿಕೊಂಡು ಮುಂದುವರಿಯಬೇಕಾಗುತ್ತದೆ. ಇಲ್ಲವಾದರೆ ಅವರ ಸವಿನೆನಪಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ನಾನು ಭಾಗಿಯಾದುದ್ದಕ್ಕೆ ಅರ್ಥವಿರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ನಾನು ಕುಂದಾಪುರದಿಂದ ಇಲ್ಲಿಗೆ ಬಂದು ಅವರನ್ನು ನೆನಪಿಸಿಕೊಳ್ಳದಿದ್ದರೆ ನನ್ನ ಮಾತು ಸಾರ್ಥಕವೆನಿಸದು.
ಕಡಲತೀರದ ಭಾರ್ಗವ, ನಡೆದಾಡುವ ವಿಶ್ವಕೋಶ ಎಂಬಿತ್ಯಾದಿ ಬಿರುದುಗಳಿಂದ ಪ್ರಸಿದ್ದಿ ಪಡೆದಿದ್ದ ಕಾರಂತರದ್ದು ಒಂದು ವಿಶಿಷ್ಟವಾದ ವ್ಯಕ್ತಿತ್ವವೆಂದೇ ಹೇಳಬೇಕು. ಮನದಲ್ಲಿ ಕೆಚ್ಚು, ಸಾಧನೆಯ ಹುಚ್ಚು ಇರುವ ಪ್ರತಿ ವಿದ್ಯಾರ್ಥಿಗೂ ಕಾರಂತರು ಸ್ಫೂರ್ತಿಯ ಚೆಲುವೆಯೇ ಸರಿ. ವಿಶ್ವದ ಅದ್ಭುತಗಳೆಂದು ಏಳು ನಿರ್ಜೀವ ವಸ್ತುಗಳನ್ನು ಗುರುತಿಸಿದ್ದಾರೆ. ಒಂದು ವೇಳೆ ಜೀವಂತ ಇರುವವರನ್ನು ಆ ಪಟ್ಟಿಯಲ್ಲಿ ಸೇರಿಸುವುದಾದರೆ, ಆ ಯಾದಿಯಲ್ಲಿ ಕಾರಂತರದ್ದು ಮೊದಲ ಹೆಸರಾಗಿರುತ್ತಿತ್ತೆನೋ. ಕಾರಣ ಅವರ ಸಾಹಿತ್ಯವೇ ಒಂದು ಅದ್ಭುತ. ಇನ್ನೂ ಹೇಳಬೇಕೆಂದರೆ ಅವರೇ ಒಂದು ಅದ್ಭುತ ಪ್ರತಿಭೆ. ಎಲ್ಲಾ ಕ್ಷೇತ್ರದಲ್ಲಿಯೂ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದರು. ಕಾರಂತರ ಸಾಹಿತ್ತಿಕ ಹಾಗೂ ಖಾಸಗಿ ಬದುಕುಗಳೆರಡೂ ನಮಗೆ ಸ್ಫೂರ್ತಿ ತರುವಂತದ್ದು. ಇಂದು ಕಾರಂತರು ನಮ್ಮಿಂದ ದೂರವಾಗಿರಬಹುದು, ಆದರೆ ಅವರ ಜ್ಞಾನ ಸಂಪತ್ತು ಪ್ರತಿ ಯುವ ಬರಹಗಾರರ ಹೃದಯದಲ್ಲಿ ಅಚ್ಚಳಿಯದೇ ಉಳಿದಿದೆ. ಇದು ಬರಿ ಉತ್ಪ್ರೇಕ್ಷೆಯ ಮಾತುಗಳಲ್ಲ ಅವರ ಕೃತಿಗಳನ್ನು ಓದಿದ ಪ್ರತಿಯೊಬ್ಬರಿಂದಲೂ ಹೊರಡುವ ಮಾತುಗಳೆಂಬುದಂತೂ ಸತ್ಯ.
ಇನ್ನೂ . . . ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಎಂದ ಮೇಲೆ ಇಂದಿನ ಸಾಹಿತ್ಯದ ಸ್ಥಿತಿ, ಶಿಕ್ಷಣ ಹಾಗೂ ವಿದ್ಯಾರ್ಥಿ ಮಿತ್ರರುಗಳು ಒಂದಿಷ್ಟು ಹೇಳಬೇಕಾಗುತ್ತದೆ. ಇಂದಿನ ಪರಿಸ್ಥಿತಿಯನ್ನು ಗಮನಿಸಿದಾಗ ಸಾಹಿತ್ಯವೆಂಬುದು ಸೊರಗುತ್ತಿದೆಯೋ ? ಏನೋ ಎಂದು ನನಗನಿಸುತ್ತದೆ. ಯಾಂತ್ರಿಕೃತವಾಗುತ್ತಿರುವ ಬದುಕಿನ ನಡುವೆ ಸಾಹಿತ್ಯ ಕೃತಿಗಳನ್ನು ಆಸ್ವಾದಿಸುವ ಮನಗಳು ಮರೆಯಾಗುತ್ತಲಿವೆ ಎಂದರೆ ತಪ್ಪಾಗದೇನೋ. ಕಥೆ, ಕಾದಂಬರಿಗಳನ್ನು ಓದುವುದಕ್ಕಾಗಲಿ, ಕವನ ರಚಿಸುವುದಕ್ಕಾಗಲಿ ಸಮಯವೆಲ್ಲಿದೆ ಎಂಬುದು ನನ್ನ ಬಹಳಷ್ಟು ಮಿತ್ರರುಗಳಿಂದ ಕೇಳಿದ ಮಾತು. ಇದು ಒಂದಿಷ್ಟು ವರ್ಗದ ಕಥೆಯಾದರೆ, ಮತ್ತೊಂದಿಷ್ಟು ಜನ ಪಠ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳತ್ತ ತಲೆಹಾಕುವುದೇ ಇಲ್ಲ. ಒಂದು ಥರವಾಗಿ ನೋಡಿದರೆ ನಮ್ಮ ಶಿಕ್ಷಣವೇ ಅಂತಹದ್ದು. ಅದು ಕೇವಲ ಉದ್ಯೋಗಿಗಳನ್ನು ಸೃಷ್ಟಿಸುವ ಉತ್ಪಾದನಾ ಯಂತ್ರವಾಗಿದೆಯೇ ಹೊರತು, ಮಾನವೀಯ ಮೌಲ್ಯಗಳನ್ನು ಬೋಧಿಸುವ ಸಂಸ್ಕೃತಿಯ ಕೇಂದ್ರವಾಗಿ ಉಳಿದಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಈ ಸಾಹಿತ್ಯ, ಸಂಸ್ಕೃತಿಯ ಅಗತ್ಯವೇ ಕಂಡುಬರುವುದಿಲ್ಲ. ಕಾರಣ ಇಷ್ಟೇ ತಾನು ಕಲಿತಾದ ಮೇಲೆ ತನಗೆ ಯಾವ ಉದ್ಯೊಗ ದೊರೆಯುತ್ತದೆ ಎಂಬುದರ ಕಡೆಗೆ ಬಹುತೇಕ ವಿದ್ಯಾರ್ಥಿ ಮಿತ್ರರುಗಳ ಗಮನವಿರುತ್ತದೆ. ಈ ಎಲ್ಲದರ ನಡುವೆ ಸಾಹಿತಯಾಸಕ್ತರಾದ ನಾವು ಬದುಕುತ್ತಿದ್ದೇವೆ. ಈ ತರನಾದಂತಹ ಅಹಿತಕರ ಪರಿಸ್ಥಿತಿ ದೂರವಾಗಬೇಕಾದರೆ ಇಂತಹ ವೇದಿಕೆಗಳು ಅವಶ್ಯಕವಾಗುತ್ತವೆ. ಇಂತಹ ಕಾರ್ಯಕ್ರಮಗಳಿಂದ ಮಾತ್ರ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಸಾಧ್ಯ ಎಂಬುದು ನನ್ನ ಅಭಿಪ್ರಾಯ. ಅರಳಿ ಮರೆಯಾಗುವ ಪ್ರತಿಭೆಗಳನ್ನು ಶೋಧಿಸಿ ಗುರುತಿಸುವ ಕಾರ್ಯಕ್ರಮವನ್ನು ಈ ಸಂಘಟನೆ ಮಾಡಿದೆ. ನಿಜವಾಗಲೂ ಇದೊಂದು ಶ್ಲಾಘನೀಯ ವಿಚಾರವೇ. ಇದು ಬರಿ ಪ್ರತಿಭೆಯನ್ನು ಗುರುತಿಸುವ ಕಾರ್ಯ ಮಾತ್ರವಲ್ಲ ಸಾಹಿತ್ಯ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಬಗೆಯೂ ಹೌದೆನಿಸುತ್ತದೆ. ಯಾವುದೇ ವ್ಯಕ್ತಿ ಇರಲಿ ತನ್ನ ವೃತ್ತಿಯೊಂದಿಗೆ ಪ್ರವೃತ್ತಿಯನ್ನು ಕೂಡ ಅಭಿವ್ಯಕ್ತಗೊಳಿಸಿದಾಗ ಮಾತ್ರ ಆತನ ಬದುಕು ಪರಿಪೂರ್ಣತೆಯನ್ನು ಕಂಡುಕೊಳ್ಳಲು ಸಾಧ್ಯ.
ಒಂದು ಸಾಹಿತ್ಯ ಬೆಳೆಯಬೇಕೆಂದರೆ ಮೊದಲು ಭಾಷೆ ಅಭಿವೃದ್ಧಿಯಾಗಿರಬೇಕು. ಭಾಷೆ ಬೆಳೆಯಬೇಕಾದರೆ ಆ ಭಾಷೆಯನ್ನಾಡುವ ಜನ ಆ ಭಾಷೆಯ ಬಗ್ಗೆ ಅಭಿಮಾನ ಹೊಂದಿರಬೇಕು ಜೊತೆಗೆ ಮಾತೃಭಾಷೆಯನ್ನು ಉಳಿಸಿಕೊಳ್ಳುವ ಛಲವೂ ಇರಬೇಕು. ಇಂದು ಕನ್ನಡ ಭಾಷೆ ಮತ್ತು ಸಾಹಿತ್ಯಗಳೆರಡೂ ಬೆಳೆದಿವೆ


ಆದರೆ ಭಾಷಾಭಿಮಾನ ಎನ್ನುವುದು ಮಾತ್ರ ದೂರದ ಮಾತಾಗಿ ಹೋಗಿದೆ. ಕನ್ನಡ ಭಾಷಿಕರು ಎಂದರೆ ಕೀಳಾಗಿ ಕಾಣುವವರು ಕೂಡ ಕಾಣಸಿಗುತ್ತಾರೆ. ನನ್ನ ಪ್ರಕಾರ ಯಾವ ಭಾಷೆಯೂ ಕೀಳಲ್ಲ, ಮೇಲೂ ಅಲ್ಲ. ಆದರೂ ಕೂಡ ಜನಿಸಿದ ನಾಡಿನ ಭಾಷೆಯನ್ನು ಅಭಿಮಾನಿಸುವುದು ಪ್ರತಿಯೊಬ್ಬನ ಕರ್ತವ್ಯವಾಗಿರುತ್ತದೆ. ಹಾಗಂದ ಮಾತ್ರಕ್ಕೆ ಇತರ ಭಾಷೆಗಳನ್ನು ಬಳಸಬಾರದೆಂದು ನಾನೆಂದೂ ಹೇಳುವುದಿಲ್ಲ. ಮಾತೃಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ ಎಂದು ಮಾತ್ರ ನಾನು ಹೇಳಬಲ್ಲೆ. ಈ ಕಾರ್ಯವನ್ನು ಪ್ರತಿಯೊಬ್ಬ ಕನ್ನಡಿಗನು ಮನಪೂರ್ವಕವಾಗಿ ಮಾಡಬೇಕಾಗಿದೆ. ಬದಲಾಗಿ ಭಾಷೆಯನ್ನು ಉಳಿಸಿ ಬೆಳೆಸಿ ಎಂದು ಹೋರಾಟ ಮಾಡಿ ಸಾಮಾಜಿಕ ಶಾಂತಿಗೆ ಭಂಗತರುವುದರಿಂದ ಸಾಧ್ಯವಿಲ್ಲ. ಪರರ ಸಂಸ್ಕೃತಿಯನ್ನು ಪ್ರೀತಿಸು, ನಿನ್ನ ಸಂಸ್ಕೃತಿಯಲ್ಲಿ ಬದುಕು ಎಂಬ ಗಾಂಧೀಜಿಯವರ ಹಿತನುಡಿ ಇಲ್ಲಿ ಪ್ರಸ್ತುತವೆನಿಸುತ್ತದೆ.
ಇನ್ನು ವಿದ್ಯಾರ್ಥಿ ಸಂಬಂಧಿತ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಒಂದೆರಡಿಲ್ಲ. ಸರಕಾರಿ ವಿದ್ಯಾ ಸಂಸ್ಥೆಗಳಲ್ಲಿ ಉಪನ್ಯಾಸಕರ ಕೊರತೆ ಹಾಗೂ ಮೂಲ ಸೌಕರ್ಯಗಳ ಕೊರತೆ ಸಾಮಾನ್ಯವಾಗಿ ಎದ್ದು ಕಾಣುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಎಲ್ಲವನ್ನೂ ಪೂರೈಸಕೊಂಡು ಸೂಕ್ತ ಶಿಕ್ಷಣವನ್ನೇನೋ ನೀಡುತ್ತಿವೆ. ಆದರೆ ಶಿಕ್ಷಣವೆನ್ನುವುದು ಮಾತ್ರ ವ್ಯವಹಾರಿಕವಾಗಿಯೇ ಉಳಿದುಬಿಟ್ಟಿದೆ. ಉದ್ಯೋಗಕ್ಕಾಗಿ ಶಿಕ್ಷಣವಲ್ಲ, ಬಾಳುವುದಕ್ಕಾಗಿ ಶಿಕ್ಷಣವೆಂಬ ವಾತಾವರಣವಿಂದು ನಿರ್ಮಾಣವಾಗಬೇಕಿದೆ. ಅಂದರೆ ನಮ್ಮ ಶಿಕ್ಷಣ ವ್ಯವಸ್ಥೆಯೇ ಬದಲಾಗಬೇಕಿದೆ. ಪರೀಕ್ಷೆಯನ್ನು ಎದುರಿಸುವುದಕ್ಕಾಗಿ ಕಲಿಕೆಯಾಗಬಾರದು, ಬಾಳುವುದಕ್ಕಾಗಿ ಕಲಿಕೆ ಇರಬೇಕು. ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳನ್ನು ತೊಡಗಿಸುವಂತಹ ಕಾರ್ಯವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸಬೇಕೆಂಬ ನಿಯಮವನ್ನೇನೋ ತಂದಿದೆ ಆದರೆ ಅದೆಷ್ಟು ಅನುಷ್ಠಾನಗೊಳ್ಳುತ್ತಿದೆ ಎಂಬುದನ್ನು ಕೂಡ ವಿಚಾರ ಮಾಡಬೇಕಾಗಿದೆ. ಶೈಕ್ಷಣಿಕ ಸಂಸ್ಥೆಗಳು ಈ ನಿಯಮವನ್ನು ವಿಶಿಷ್ಟ ರೀತಿಯಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಇನ್ನೂ ಶಿಕ್ಷಣೇತರ ವಿದ್ಯಾರ್ಥಿ ಸಮಸ್ಯೆಗಳೆಂದಾಗ ಮೊದಲು ರ್‍ಯಾಗಿಂಗ್‌ನ ನೆನಪಾಗುತ್ತದೆ. ರ್‍ಯಾಗಿಂಗ್ ಎನ್ನುವುದು ವಿಕೃತ ಮನಸ್ಥಿತಿಯೋ, ಚಂಚಲತೆಯೋ ಹಣ-ಜನಬಲದಿಂದ ಉದಯಿಸಿದ ಅಹಂ ಭಾವವೋ ಗೊತ್ತಿಲ್ಲ. ಆದರೆ ಅಮಾಯಕ ವಿದ್ಯಾರ್ಥಿಗಳ ಪಾಲಿಗೆ ಅಂಟಿದ ಭಯಾನಕ ಪಿಡುಗೆಂಬುದು ಮಾತ್ರ ನಿಜ. ಇದರ ವಿರುದ್ದ ಪ್ರಬಲವಾದ ಕಾನೂನುಗಳಿದ್ದರೂ ಕೂಡ ಪ್ರಯೋಜನವಾಗದೇ ಇರುವುದು ದುರದೃಷ್ಟಕರ ಸಂಗತಿ. ಶಿಕ್ಷಣ ಸಂಸ್ಥೆಗಳು ಹಾಗೂ ಸರಕಾರ ಈ ಬಗ್ಗೆ ಮತ್ತಷ್ಟು ಗಂಭೀರವಾಗಿ ಚಿಂತಿಸುವ ಅಗತ್ಯತೆ ಇದೆ. ವಿದ್ಯಾರ್ಥಿ ಸಂಘಟನೆಗಳೂ ಕೂಡ ಇದರ ವಿರುದ್ದ ಧ್ವನಿ ಎತ್ತಬೇಕಾಗಿದೆ. ಆದರೆ ಇಂದು ಯಾವ ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿಗಳ ನೆರವಿಗಾಗಿ ಇರಬೇಕಿತ್ತೊ ಅದೇ ಸಂಘಟನೆಗಳಿಂದು ವಿದ್ಯಾರ್ಥಿಗಳಲ್ಲಿ ಕೋಮು ಭಾವನೆ ಮತ್ತು ಧರ್ಮ ಭೇದವನ್ನು ಬಿತ್ತುತ್ತಿವೆ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ರಾಜಕೀಯ ಪಕ್ಷದ, ಮತ ಧರ್ಮದ ಪ್ರತಿನಿಧಿಯಂತೆ ವರ್ತಿಸುತ್ತಿವೆ. ವಿದ್ಯಾರ್ಥಿ ಸಂಘಟನೆಗಳೆಂಬುದು ಅಧಿಕಾರ, ಪ್ರತಿಷ್ಠೆಗಾಗಿಯೋ ಅಥವಾ ಅವರ ಹಿತರಕ್ಷಣೆಗಾಗಿಯೋ ಎಂಬ ಜಿಜ್ಞಾಸೆ ಮೂಡುತ್ತಿದೆ. ಯುವಕರ ಕೆರಳಿಕೆ, ಹೋರಾಟ ಎಂಬುದು ಬೌದ್ಧಿಕ, ಸಾಂಸ್ಕೃತಿಕ, ಶೈಕ್ಷಣಿಕ ದಾಸ್ಯವನ್ನು ತೊಲಗಿಸುವಲ್ಲಿ ವಿನಿಯೋಗವಾಗಬೇಕೆ ಹೊರತು ಜಾತಿ, ಮತ, ದ್ವೇಷಗಳನ್ನು ಬೆಳೆಸುವಲ್ಲಿ ಕಾರಣವಾಗಬಾರದು.
ಅದೇನೆ ಇರಲಿ ನಾವು ಮಾತ್ರ ವಿದ್ಯಾರ್ಥಿಯಾಗಿಯೇ ಇರುವ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿ ಮಾತ್ರವಾಗಿರದೇ ಬದುಕಬೇಕೆಂಬ ಗುರುವಿನ ವಿದ್ಯಾರ್ಥಿಯಾಗುವ ಹಿರಿಯರು ಸಮೃದ್ಧವಾಗಿ ಬೆಳೆಸಿಕೊಂಡು ಬಂದ ಸಾಹಿತ್ಯವನ್ನು ಮತ್ತಷ್ಟು ಅರಗಿಸಿಕೊಂಡು ಸಮಾಜಕ್ಕೆ ಹೊಸದೊಂದನ್ನು ನೀಡುವ ಹಿರಿಯರೆದುರು ಕಿರಿಯರಾಗಿ, ಕಿರಿಯರಿಗೆ ಮಾದರಿಯಾಗಿ, ನೊಂದವರಿಗೆ ಬೆಳಕಾಗಿ ಬಾಳುವ ಸಮಾಜದ ದಿಕ್ಕೆಡಿಸುವ ದುಷ್ಟ ಶಕ್ತಿಗಳ ಸದೆಬಡಿಯಲು ಲೇಖನಿಯೆಂಬ ಅಸ್ತ್ರವನ್ನು ಮತ್ತಷ್ಟು ಹರಿತವಾಗಿಸಬೇಕು.
ಸುನೀಲ್ ಎಚ್.ಜಿ. ಬೈಂದೂರು ಪ್ರಥಮ ಬಿ.ಬಿ.ಎಮ್. ಭಂಡಾರ್ಕರ್‍ಸ್ ಕಾಲೇಜ್ ಕುಂದಾಪುರ (