Ahvana patrike a Newspaper sized Invitation created by shekara ajekar,.

Friday, September 18, 2009

೧೪ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ವಿವಿಧ ಸ್ಪರ್ಧೆ

ಕೋಟ ಮಿತ್ರ ಮಂಡಳಿ ಮತ್ತು ಶ್ರೀ ಕಾಲೇಜು ಮೂಡುಬಿದಿರೆ ಆಶ್ರಯದಲ್ಲಿ
ಡಾ| ಶಿವರಾಮ ಕಾರಂತರ ಸವಿನೆನಪಿನಲ್ಲಿ ಮೂಡುಬಿದಿರೆಯಲ್ಲಿ
೧೪ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ
ಮೂಡುಬಿದಿರೆ: ಮೂಡುಬಿದಿರೆಯಲ್ಲಿ ಅಕ್ಟೋಬರ್ ೧೦ರಂದು ಕೋಟಮಿತ್ರ ಮಂಡಳಿ, ಶ್ರೀ ಕಾಲೇಜು ಮತ್ತು ಸರ್ವರ ಸಹಕಾರದೊಂದಿಗೆ ನಡೆಯುವ ೧೪ನೇಯ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಪ್ಟೆಂಬರ್ ೨೫ ಕೊನೆಯ ದಿನಾಂಕವಾಗಿದೆ ಎಂದು ಸಂಘಟಕ, ಶ್ರೀ ಕಾಲೇಜು ವಿದ್ಯಾಸಂಸ್ಥೆಗಳ ಸ್ಥಾಪಕ ಶೇಖರ ಅಜೆಕಾರು ಮತ್ತು ಕೋಟಮಿತ್ರ ಮಂಡಳಿಯ ಉಪೇಂದ್ರ ಸೋಮಯಾಜಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಮತ್ತು ಮುಂಬಯಿ ಜಿಲ್ಲೆಗಳಲ್ಲಿ ಯಾವುದೇ ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವ ಸಾಹಿತ್ಯ, ಬರವಣಿಗೆ, ಸಂಘಟನೆಯಲ್ಲಿ ಸಾಧನೆ ಮಾಡಿದವರಿಗೆ ಅಧ್ಯಕ್ಷತೆಯ ಗೌರವ ಸಿಗಲಿದೆ. ಸಾಧಕ ವಿದ್ಯಾರ್ಥಿಗಳನ್ನು ಸಮ್ಮಾನಿಸುವ ಕಾರ್ಯಕ್ರಮವು ಇದೆ. ಸಾಧಕರು ತಮ್ಮ ಸಾಧನೆಗಳನ್ನು ಸೂಕ್ತ- ಲಭ್ಯ ದಾಖಲೆಗಳೊಂದಿಗೆ ಪ್ರಾಚಾರ್ಯರ ಅಥವಾ ಕನ್ನಡ ವಿಭಾಗದ ಮುಖ್ಯಸ್ಥರ ಶಿಫಾರಸ್ಸಿನೊಂದಿಗೆ ಕಳುಹಿಸಬಹುದು.
ಮೂರು ಪುಟ ಮಿತಿಯಲ್ಲಿ ಕಾರಂತರ ಒಂದು ಕಾದಂಬರಿ ವಿಮರ್ಶೆ, ಮತ್ತು ಕಾರಂತರ ಬರಹಗಳ ವಿಮರ್ಶೆ ಸ್ಪರ್ಧೆ ಇದೆ. ಇನ್‌ಲ್ಯಾಂಡ್ ಲೆಟರ್‌ನಲ್ಲಿ (ಅಂತರ್‌ದೇಶಿಯ ಪತ್ರ) ಕಥಾ ಸ್ಪರ್ಧೆ ಇದೆ. ವಿಜೇತರಿಗೆ ಸಮ್ಮೇಳನದಲ್ಲಿ ತಮ್ಮ ಬರಹಗಳನ್ನು ಪ್ರಸ್ತುತಪಡಿಸಲು ಅವಕಾಶ ಕಲ್ಪಿಸಲಾಗಿದೆ. ಕವನ ಸ್ಪರ್ಧೆ, ಛಾಯಾಚಿತ್ರ ಸ್ಪರ್ಧೆ ( ಇಂಚು ಆಕಾರ), ಮೊಬೈಲ್ ಪೊಟೋ ಸ್ಪರ್ಧೆ (ಇಂಚು ಅಥವಾ ಆಕಾರ ಯಾವುದೇ ಡಿಜಿಟಲ್ ಕರೆಕ್ಷನ್ ಇಲ್ಲದೆ) ಸ್ಪರ್ಧೆ ಇದೆ.
ಕರಾವಳಿಯ ನಾಲ್ಕು ಜಿಲ್ಲೆಗಳಲ್ಲಿ ಯಾವುದೇ ಮಾಧ್ಯಮದಲ್ಲಿ ಓದುವ, ವೃತ್ತಿಪರ ಕೋರ್ಸುಗಳಾದ ಬಿ.ಇ, ಎಮ್.ಬಿ.ಬಿ.ಎಸ್., ಎಮ್‌ಬಿಎ, ಎಮ್‌ಸಿಎ, ಸಹಿತ ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ೨೦೦೯-೧೦ ರಲ್ಲಿ ಓದುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗಾಗಿ


ವಿಳಾಸ : ಶೇಖರ ಅಜೆಕಾರು, ಮುಖ್ಯಸ್ಥರು
ಶ್ರೀ ಕಾಲೇಜು, ಮೂಡುಬಿದಿರೆ - ೫೭೪೨೨೭
(ಸಂ.ದೂ) ೯೩೪೨೪೮೪೦೫೩ / ೯೦೩೬೪೨೩೩೧೮

No comments: