Ahvana patrike a Newspaper sized Invitation created by shekara ajekar,.

Friday, September 18, 2009

೧೪ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ

ಕೋಟ ಮಿತ್ರ ಮಂಡಳಿ ಮತ್ತು ಶ್ರೀ ಕಾಲೇಜು ಮೂಡುಬಿದಿರೆ ಆಶ್ರಯದಲ್ಲಿ
ಡಾ| ಶಿವರಾಮ ಕಾರಂತರ ಸವಿನೆನಪಿನಲ್ಲಿ ಮೂಡುಬಿದಿರೆಯಲ್ಲಿ
೧೪ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ
ಅಧ್ಯಕ್ಷರು ನೀವೇ ..... ? ...... !!!
ಮೂಡುಬಿದಿರೆಯಲ್ಲಿ ಅಕ್ಟೋಬರ್ ೧೦ರಂದು ನಡೆಯುವ ೧೪ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ನೀವೇ ಆಗಬಹುದು. ನೀವು ಮಾಡಬೇಕಾದುದು ಇಷ್ಟೆ ನಿಮ್ಮ ಸಾಹಿತ್ಯಕ, ಸಾಹಿತ್ಯ ಸಂಘಟನೆ ಸಹಿತ ಸಾಧನೆಗಳು ಮತ್ತು ಸ್ವವಿವರಗಳನ್ನು (ಲಭ್ಯ ದಾಖಲೆ ಸಹಿತ) ಕಳುಹಿಸಿಕೊಡಿ.
ನಿಮ್ಮ ಇತ್ತೀಚಿನ ಭಾವಚಿತ್ರ, ವಿಳಾಸ, ದೂರವಾಣಿ, ಸಂಚಾರಿ ದೂರವಾಣಿ, ಈ-ಮೇಲ್ (ವಿ-ಅಂಚೆ-ಇದ್ದರೆ) ಜೊತೆಗಿರಲಿ.
ಸಾಧ್ಯವಾದರೆ ಪ್ರಾಂಶುಪಾಲರಿಂದ ಅಥವಾ ಉಪನ್ಯಾಸಕರ ಶಿಪಾರಸು ಜೊತೆಗಿರಲಿ.
ಶೈಕ್ಷಣಿಕ ಅರ್ಹತೆ : ಕಾಸರಗೋಡು, ದ.ಕ, ಉಡುಪಿ, ಮುಂಬಯಿ ಜಿಲ್ಲೆಗಳಲ್ಲಿ ಯಾವುದೇ ಪದವಿ - ಸ್ನಾತಕೋತ್ತರ ಪದವಿಯಲ್ಲಿ ೨೦೦೯-೧೦ ರಲ್ಲಿ ಕಲಿಯುತ್ತಿರಬೇಕು. ವಿದ್ಯಾರ್ಥಿ ಗುರುತು ಪತ್ರದ ನಕಲು ಪ್ರತಿ ಅಥವಾ ಕಾಲೇಜಿನಿಂದ ಕಲಿಯುವಿಕೆ ಪ್ರಮಾಣ ಪತ್ರ ಲಗತ್ತಿಕರಿಸಬೇಕು.
ಸಮ್ಮಾನಿತರು ನೀವೇ ......... ? ...... !!!
ನಿಮ್ಮ ಸಾಹಿತ್ಯಕ, ಸಮಾಜಿಕ ಶೈಕ್ಷಣಿಕ ಸಾಧನೆಗಳನ್ನು ಪರಿಗಣಿಸಿ ಕನಿಷ್ಠ ೫ ಮಂದಿಯನ್ನು ಸಮ್ಮೇಳನದಲ್ಲಿ ಸಮ್ಮಾನಿಸಲಾಗುತ್ತದೆ. ಯಾವುದೇ ವಶೀಲಿಬಾಜಿ ಇಲ್ಲದೆ ಸಮ್ಮಾನಿತರನ್ನು ಸಾಧನೆಯ ಆಧಾರದಲ್ಲಿ ಆರಿಸಲಾಗುತ್ತದೆ. ನಿಮ್ಮ ಸಂಪೂರ್ಣ ಸ್ವ-ವಿವರ ಪರಿಚಯ ಸಾಧನೆಗಳ ವಿವರಗಳನ್ನು ಪೂರಕವಾದ ದಾಖಲೆ ಇರುವ ಪ್ರತಿಯೊಂದಿಗೆ ಸೆ.೨೫ ರೊಳಗೆ ಕಳುಹಿಸಿಕೊಡಿ.
ವಿವಿಧ ಸ್ಪರ್ಧೆಗಳು
ಕಥಾ ಸ್ಪರ್ಧೆ :- ಪೊಸ್ಟ್ ಇನ್‌ಲ್ಯಾಂಡ್ ಲೆಟರ್ (ಅಂತರ್‌ದೇಶೀಯ ಪತ್ರ)ದಲ್ಲಿ ಸ್ವಂತ ಕಥೆಯನ್ನು ಬರೆದು ಕಳುಹಿಸಿ ಆಯ್ಕೆಯಾದವರಿಗೆ ಸಮ್ಮೇಳನದಲ್ಲಿ ಕಥಾ ವಾಚನಕ್ಕೆ ಅವಕಾಶವಿದೆ. ನಿಮ್ಮ ಕಥೆಯ ಒಂದು ಪ್ರತಿಯನ್ನು ನಿಮ್ಮಲ್ಲಿ ಇಟ್ಟುಕೊಂಡು ಕಳುಹಿಸಿ. ನಿಮ್ಮ ವಿಳಾಸ, ಓದುತ್ತಿರುವ ಕಾಲೇಜು, ದೂರವಾಣಿ ಸಹಿತ ಸ್ವ-ವಿವರಗಳನ್ನು ಲಗತ್ತಿಸಿ.
ಕವನ ಸ್ಪರ್ಧೆ
ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳ ಕವಿತೆಗಳನ್ನು ಆಹ್ವಾನಿಸಲಾಗಿದೆ. ಒಬ್ಬರು ಎರಡು ಕವಿತೆಗಳನ್ನು ಕಳುಹಿಸಬಹುದು. ಚುಟುಕುಗಳಾದರೆ ೫ ಕಳುಹಿಸಿ. ಉಪನ್ಯಾಸಕರಿಂದ ಅಥವಾ ಪ್ರಾಂಶುಪಾಲರಿಂದ ಒಂದು ಪ್ರಮಾಣ ಪತ್ರ ಜೊತೆಗಿರಿಸಿ. ಆಯ್ಕೆಯಾದವರಿಗೆ ಕವಿಗೋಷ್ಠಿಯಲ್ಲಿ ಭಾಗವಹಿಸುವ ಅವಕಾಶವಿದೆ. ಉಳಿದವರಿಗೆ ಪ್ರತಿನಿಧಿಯಾಗಲು ಅವಕಾಶವಿದೆ.
ಇಂಟರ್‌ನೆಟ್ ಕವನ ಸಂಕಲನ
ವಿದ್ಯಾರ್ಥಿಗಳ ಪ್ರಥಮ ಇಂಟರ್‌ನೆಟ್ ಕವನ ಸಂಕಲನವನ್ನು ಸಮ್ಮೇಳನ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಗುವುದು. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಉತ್ತಮ ಎರಡು ಕವನಗಳನ್ನು ಕಳುಹಿಸಿ. ಪಾಸ್‌ಪೋರ್ಟ್ ಸೈಜಿನ ಪೊಟೋ ಜೊತೆಗಿರಲಿ. ನಿಮ್ಮ ವಿಳಾಸ, ಓದುತ್ತಿರುವ ಕಾಲೇಜು, ದೂರವಾಣಿ ಸಹಿತ ಸ್ವ-ವಿವರಗಳನ್ನು ಲಗತ್ತಿಸಿ.



ಕಾದಂಬರಿ ವಿಮರ್ಶೆ
ಡಾ| ಶಿವರಾಮ ಕಾರಂತರ ಯಾವುದಾದರೂ ಒಂದು ಕಾದಂಬರಿ ಕುರಿತು ೨ ರಿಂದ ೩ ಪುಟದ ವಿಮರ್ಶೆ. ಪ್ರಾಂಶುಪಾಲರ/ ಕನ್ನಡ ಉಪನ್ಯಾಸಕರ ಶಿಪಾರಸ್ಸಿನೊಂದಿಗೆ ಕಳುಹಿಸಿ. ಭಾವಚಿತ್ರ ಸ್ವ-ವಿವರ ಜೊತೆಗಿರಲಿ.
ಕಾರಂತರ ಬರಹಗಳು ನನ್ನವಿಮರ್ಶೆ
ಕಾರಂತರ ಬರಹಗಳು ನನ್ನ ವಿಮರ್ಶೆ ಕುರಿತ ೨-೩ ಪುಟದ ಪ್ರಬಂಧ ಬರೆದು ಕಳುಹಿಸಿ. ಪೊಟೋ ವಿವರ ಪ್ರಾಂಶುಪಾಲರ/ ಕನ್ನಡ ವಿಭಾಗದ ಪತ್ರ ಜೊತೆಗಿರಲಿ.
ಕಾರ್ಡಿನಲ್ಲಿ ಚಿತ್ರ ಸ್ಪರ್ಧೆ
ಕಾರಂತರ ಯಾವುದಾದರೊಂದು ಕಾದಂಬರಿಯ ಕುರಿತಾದ ಚಿತ್ರವನ್ನು ಅಂಚೆ ಕಾರ್ಡಿನಲ್ಲಿ ಬಿಡಿಸಿ ಕಳುಹಿಸಬೇಕು. ದೃಶ್ಯದ ಬಗ್ಗೆ ಒಂದೆರಡು ವಾಕ್ಯದ ವಿವರಣೆ ಅಗತ್ಯ.

ಮೊಬೈಲ್ ಪೊಟೋ ಸ್ಪರ್ಧೆ
ಮೊಬೈಲ್ ಪೊಟೋ ಸ್ಪರ್ಧೆಯನ್ನು ಉಡುಪಿ ಛಾಯಾಚಿತ್ರ ಪತ್ರಕರ್ತರ ಸಂಘದ ಬಹುಮಾನ ಪ್ರಾಯೋಜಕತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸ್ಪರ್ಧೆ.
ಪೊಟೋ ಇಂಚು ಅಥವಾ ಇಂಚು ಗಾತ್ರದಲ್ಲಿರಬೇಕು.

ಪೊಟೋಸ್ಪರ್ಧೆ
ಕಾಲೇಜು ಕ್ಯಾಂಪಸ್ ವಿಷಯದಲ್ಲಿ ಪೊಟೋ ಸ್ಪರ್ಧೆ ಇಂಚಿಕ್ಕಿಂತ ಹೆಚ್ಚಿನ ಆಕಾರದ ಪೊಟೋಗಳನ್ನು (ಡಿಜಿಟಲ್ ಕರೆಕ್ಷನ್ ಇಲ್ಲದೆ) ಕಳುಹಿಸಿ. ಯಾವುದೇ ಕಾಲೇಜಿನ ಲ್ಯಾಂಡ್‌ಸ್ಕೇಪ್ ಛಾಯಾಚಿತ್ರಗಳನ್ನು ಕಳುಹಿಸಬಹುದು. ಛಾಯಾಗ್ರಾಹಕರ ಪೂರ್ಣವಿಳಾಸ ದೂರವಾಣಿ ಸಹಿತ ವಿವರಗಳನ್ನು ಪ್ರತ್ಯೇಕವಾಗಿ ಕಳುಹಿಸಿ, ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನವಿದೆ.
ಪ್ರತಿನಿಧಿ
ಪ್ರತಿಯೊಂದು ಕಾಲೇಜಿನಿಂದ ಇಬ್ಬರು ಸಾಹಿತ್ಯಾಸಕ್ತ ಬರಹಗಾರ ವಿದ್ಯಾರ್ಥಿ / ವಿದ್ಯಾರ್ಥಿನಿಯರನ್ನು ಸಮ್ಮೇಳನಕ್ಕೆ ಕಳುಹಿಸಿ ಕೊಡಬೇಕಾಗಿ ವಿನಂತಿ. ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಾಗುವುದು. ವಿವಿಧ ಗೋಷ್ಠಿ, ಸಮ್ಮಾನಕ್ಕಾಗಿ ಭಾಗವಹಿಸಲು ಆಯ್ಕೆಯಾದವರನ್ನು ಹೊರತು ಪಡಿಸಿ ಭಾಗವಹಿಸುವ ವಿದ್ಯಾರ್ಥಿಗಳ ಹೆಸರನ್ನು ಸೆ. ೨೮ರೊಳಗೆ ಕಳುಹಿಸಿಕೊಡಿ.

ವಿ.ಸೂ:- ಯಾವುದೇ ಸ್ಪರ್ಧೆಯ ಬರಹದಲ್ಲಿ ನಿಮ್ಮ ಹೆಸರು ವಿಳಾಸ ಯಾವುದೂ ಇರಬಾರದು. ಪ್ರತ್ಯೇಕವಾಗಿ
ಬರೆಯಿರಿ.
ಕೊನೆ ದಿನಾಂಕ ೨೫-೦೯-೨೦೦೯


ವಿಳಾಸ : ಶೇಖರ ಅಜೆಕಾರು, ಮುಖ್ಯಸ್ಥರು
ಶ್ರೀ ಕಾಲೇಜು, ಮೂಡುಬಿದಿರೆ - ೫೭೪೨೨೭
ತಿತಿತಿ. shಡಿeeಛಿoಟಟege.bಟogsಠಿoಣ.ಛಿom emಚಿiಟ : ಣuಟuvಚಿ@gmಚಿiಟ.ಛಿom (ಸಂ.ದೂ) ೯೩೪೨೪೮೪೦೫೩ / ೯೦೩೬೪೨೩೩೧೮

No comments: