Ahvana patrike a Newspaper sized Invitation created by shekara ajekar,.

Thursday, July 1, 2010

umesh roa yekkar honoured


ಪತ್ರಿಕೆಗಳಿಂದ ನನಗೆ ಬೆಲೆ -ಉಮೇಶ್ ರಾವ್ ಎಕ್ಕಾರು
ಪತ್ರಿಕೆಗಳಿಂದ ನನಗೆ ಬೆಲೆ ಬಂದಿದೆ. ಹೃದಯ ರಂಜನೆಗೆ ಮತ್ತು ಮೆದುಳಿನ ರಂಜನೆಗೆ ಪತ್ರಿಕೆಗಳು ಅತೀ ಅಗತ್ಯ ಎಂದು ಪ್ರಸಿದ್ದ ಪತ್ರಿಕಾ ಸಂಗ್ರಾಹಕ ಉಮೇಶ್ ರಾವ್ ಎಕ್ಕಾರ್ ಅವರು ಹೇಳಿದರು. ಅವರು ಪತ್ರಕರ್ತರ ವೇದಿಕೆ, ಮೂಡುಬಿದಿರೆಯ ಶ್ರೀಕಾಲೇಜು, ಮುಲ್ಕಿ, ಕಿನ್ನಿಗೋಳಿ ಪತ್ರಕರ್ತರ ಸಹಕಾರದೊಂದಿಗೆ ಉಮೇಶ್ ರಾವ್ ಎಕ್ಕಾರ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ನೀಡಿದ ಪತ್ರಿಕಾ ದಿನಾಚರಣೆ ಗೌರವವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.
ನನ್ನ ಮೂರುಸಾವಿರಕ್ಕಿಂತ ಮಿಕ್ಕ ಪತ್ರಿಕಾ ಸಂಗ್ರಹದಲ್ಲಿ ಅರ್ಧದಷ್ಟನ್ನು ನೀಡಿದವರು ಹರಿಕೃಷ್ಣ ಪುನರೂರು ಎಂದ ಅವರು ಪತ್ರಿಕೆಗಳು ಪತ್ರಕರ್ತರು ನೀಡಿದ ಸಹಕಾರವನ್ನು ಸ್ಮರಿಸಿಕೊಂಡರು.
ಉಮೇಶ ರಾಯರನ್ನು ಮೂವತ್ತು ಪತ್ರಿಕೆಗಳು, ತೆಂಗಿನ ಸಸಿಯನ್ನು ನೀಡಿ ಗೌರವಿಸಲಾಯಿತು.
ಹಿರಿಯರನ್ನು ಗೌರಿಸುವುದನ್ನು ನಾವು ಮರೆಯುತ್ತಿದ್ದೇವೆ, ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಅಪೂರ್ವ ಪತ್ರಿಕಾ ಸಂಗ್ರಹಕ, ಹಿರಿಯರಾದ ಉಮೇಶ್ ಅವರನ್ನು ಗೌರವಿಸಿರುವುದು ಒಳ್ಳೆಯ ಸಂಪ್ರದಾಯ ಎಂದು ಡೈಜಿವರ್ಲ್ಡ್ ವೀಕ್ಲಿಯ ಸಂಪಾದಕ ಹೇಮಾಚಾರ್ಯ ಅಭಿಪ್ರಾಯ ಪಟ್ಟರು. ಸಮಾಜದ ಅಭಿವೃದ್ದಿಯಲ್ಲಿ ಪತ್ರಿಕೆಗಳು ಮಹತ್ವದ ಪಾತ್ರವಹಿಸುತ್ತದೆ ಎಂದು ಕಿನ್ನಿಗೋಳಿ ಗ್ರಾಮಪಂಚಾಯತ್‌ನ ಅಧ್ಯಕ್ಷ ದೇವಪ್ರಸಾದ್ ಪುನರೂರು ಹೇಳಿದರು.
ಪತ್ರಿಕಾ ದಿನಾಚರಣೆಯ ದಿನ ಗೌರವಿಸಲ್ಪಡಬೇಕಾದ ಅಗ್ರ ಪಂಕ್ತಿಯ ವ್ಯಕ್ತಿಗಳಲ್ಲಿ ಉಮೇಶ್ ಒಬ್ಬರು. ಅವರ ಮೇಲೆ ಅಪಾರ ಗೌರವ ಎಂದು ಪತ್ರಕರ್ತ ಮಿಥುನ್ ನುಡಿದರು. ಸ್ಥಳೀಯ, ಗ್ರಾಮೀಣ ಪತ್ರಕರ್ತರ ಸಬಲೀಕರಣದಿಂದ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ಸಾಧ್ಯ ಇದೆ ಎಂದು ಅದ್ಯಕ್ಷತೆ ವಹಿಸಿದ್ದ ಪತ್ರಕರ್ತರ ವೇದಿಕೆ ಉಡುಪಿ ಜಿಲ್ಲಾ ಅದ್ಯಕ್ಷ್ಷ ಶೇಖರ ಅಜೆಕಾರು ಅಭಿಪ್ರಾಯ ಪಟ್ಟರು.
ಎಸ್.ಡಿ.ಎಂ ಕಾಲೇಜಿನ ಸ್ನಾತಕೋತರ ಪತ್ರಿಕೋದ್ಯಮ ವಿದ್ಯಾರ್ಥಿ ಬೊರ್ಗಲ್ ಗುಡ್ಡೆ ಮಂಜುನಾಥ್ ವಂದಿಸಿದರು.