ಉಚಿತ ಇಂಗ್ಲಿಷ್ ತರಬೇತಿ ಉಧ್ಘಾಟನೆ
ಮೂಡುಬಿದಿರೆ:ಇಂಗ್ಲೀಷ್ ಭಾಷೆಯು ಇಂದು ಪ್ರಪಂಚದ ಅತ್ಯಂತ ಪ್ರಭಾವಶಾಲಿಯಾದ ಭಾಷೆಯಗಿ ಬೆಳೆದಿದ್ದು ನಾವು ಪ್ರಪಂಚದ ಸವಾಲುಗಳಿಗೆ ಉತ್ತರ ನೀಡಲು ಇಂಗ್ಲೀಷ್
ಸಹಿತ ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಯೋಣ ಎಂದು ಮೂದಬಿದಿರೆಯ ಸೋನು ಗ್ರಾಫಿಕ್ಸ್ ನ ಮಾಲಕಿ ಸುರೇಖ ಅವರು ಹೇಳಿ
ದರು.
ಅವರು ಶ್ರೀ ಕಾಲೇಜ್ ಕಾಳಜಿ -೩ ಕಾರ್ಯಕ್ರಮವಾದ ಉಚಿತ ಇಂಗ್ಲೀಷ್ ತರಬೇತಿಯನ್ನು ಮಕ್ಕಳಿಗೆ ಸಿಹಿ ಹಂಚುವ ಮೂಲಕ ಶುಕ್ರವಾರ ಉದ್ಘಾಟಿಸಿದರು. ಮೂಡುಬಿದಿರೆಯ ಮೂರನೇ ಸರ್ಕಾರಿ ಶಾಲೆಯ ೪,೫,೬, ಮತ್ತು ೭ ತರಗತಿಯ ಮಕ್ಕಳಿಗೆ ಉಚಿತವಾಗಿ ಇಂಗ್ಲೀಷ್ ಕಲಿಕೆಯ ಅವಕಾಶವನ್ನು ಶ್ರೀ ಕಾಲೇಜ್ ವಿದ್ಯಾ ಸಂಸ್ತೆಯು ಮಾಡಿ ಕೊತ್ತಿದೆ.
ಶ್ರೀ ಕಾಲೇಜ್ ನಿರ್ದೇಶಕ
ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಸಂಗೀತ ಶಿರ್ತಾಡಿ, ಶಾಲಾ ಮುಖ್ಯೋಪಾಧ್ಯಾಯಿನಿ ಸೆವ್ರಿನ್ ಡಿಸೋಜಾ ಅತಿಥಿಗಳಾಗಿದ್ದರು.
ಶ್ರೀ ಕಾಲೇಜ್ ವಿದ್ಯಾರ್ಥಿಗಳಾದ ಹೊಸಮಾರಪದವು ಫಿಲೊಮಿನ ಕಾರ್ಯಕ್ರಮ ನಿರೂಪಿಸಿದರೆ, ಹೊಸಮಾರಪದವು ಅಶ್ವಿನಿ ಸ್ವಾಗತಿಸಿದರು.ರಾಘವೇಂದ್ರ ವಂದಿಸಿದರು.